History

ಈ ದೇವಳವು ಯಾವ ಶತಮಾನಕ್ಕೆ ಸೇರಿದ್ದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆತಿರುವುದಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಅಸ್ತಿತ್ವದಲ್ಲಿ ಇದ್ದಿತ್ತು ಎನ್ನುವುದು ನಿಸ್ಸಂದೇಹ. ದೇವಳದ ಗರ್ಭಗುಡಿ ಅರ್ಥಾತ್ ದೇವರು ನೆಲೆಸಿರುವ ಗುಹೆ ಪ್ರಾಕೃತಿಕವಾದರೂ ಎದುರು ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು ಇತ್ಯಾದಿ ರಚನೆಯಾಗಿರುತ್ತದೆ. ಕಲಾತ್ಮಕವಾದ, ಭವ್ಯವಾದ ಶಿಲಾಮಯ ಗರ್ಭಗುಡಿಯು 1997 ರಲ್ಲಿ ನವೀಕರಣ ಗೊಂಡಿದೆಯಾದರೂ, ಮೊದಲೂ ಕೂಡಾ ಶಿಲಾಮಯ ಗರ್ಭಗುಡಿಯೇ ಅಸ್ತಿತ್ವದಲ್ಲಿ ಇತ್ತು. ಈ ಗರ್ಭಗುಡಿಯು ಸಾಧಾರಣ 800 ವರ್ಷ ಹಳೆಯದು ಎನ್ನುವ ಅಭಿಪ್ರಾಯವನ್ನು ಇಲ್ಲಿಗೆ ಭೇಟಿನೀಡಿದ ಪುರಾತತ್ವ ಸಂಶೋಧಕರು, ಉಡುಪಿ ಎಂ.ಜಿ.ಎಂ ಕಾಲೇಜಿನ ಆಗಿನ ಪ್ರಾಂಶುಪಾಲರೂ ಆದ ಪ್ರೊ. ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿರುತ್ತಾರೆ. ಅಂದರೆ ಸಾವಿರಾರು ವರ್ಷಗಳಿಂದ ಇಲ್ಲಿ ಗಣಪತಿಯ ಆರಾಧನೆ ನಡೆಯುತ್ತಿತ್ತು ಎನ್ನುವುದು ನಿಸ್ಸಂದೇಹ.

Even though authentic information is not available as to how ancient the temple is, it is nevertheless true that the temple has been in existence since thousands of years. As has already been stated, the cave which is the sanctum sanctorum is a natural formation. But the Theertha Mantapa and the main entrance have been constructed much later. The magnificent Garbhagudi with its artistic and aesthetic excellence was renovated in 1997. The famous archeologist and former Principal of M.G.M.College, Udupi Prof. Gururaj Bhat who visited this place was of the view that the Garbhagudi must be about 800 years old. It is needless to say that various Pujas have been regularly going on since thousands of years.

Intro

ಗುಡ್ಡಟ್ಟು ವಿನಾಯಕ ದೇವಸ್ಥಾನ ತೀರಾ ಅಪರೂಪದ ಒಂದು ಪ್ರಾಕೃತಿಕ ದೇವಾಲಯ, ಕಾಡು ಮೇಡುಗಳ ಹಾಗೂ ಹಸಿರು ಬಯಲಿನ ಮಧ್ಯದಲ್ಲಿರುವ ರಮಣೀಯವಾದ ಬೃಹತ್ ಬಂಡೆಯೇ ಇಲ್ಲಿಯ ವಿನಾಯಕನ ಆವಾಸಸ್ಥಾನ. ಬೃಹತ್ ಬಂಡೆಯಲ್ಲಿ ಪೂರ್ವಾಭಿಮುಖವಾಗಿ ತೆರೆದಿರುವ ಮಡುವಿನಲ್ಲಿ ಕಾಲು ಮಡಚಿ, ಸೊಂಡಿಲು ತಿರುಚಿ ಕುಳಿತಿರುವ ಡೊಳ್ಳು ಹೊಟ್ಟೆಯ ಸ್ವಯಂಭು ವಿಗ್ರಹವೇ ಇಲ್ಲಿಂಯ ಆರಾಧ್ಯದೇವ, ಸ್ವಯಂಭುವಿನಲ್ಲಿ ಬಹಳ ಸ್ಪಷ್ಟ ಆಕಾರ ಹೊಂದಿರುವ ಶ್ರೀ ದೇವರ ಮೂಲಬಿಂಬವು ಕಂಠ ಪ್ರಮಾಣದವರೆಗೆ ಸದಾ ನೀರಿನಲ್ಲಿ ಮುಳುಗಿರುವುದೇ ಇಲ್ಲಿನ.

Shree Guddattu Vinayaka Temple is a rare specimen of its kind that is unique in several aspects. It is unique in that it is a natural temple. In fact, a captivatingly huge rock surrounded by verdant fields itself is the abode of Lord Vinayaka here. Nowhere else in the world can you find cross-legged and pot-bellied Ganapa with a twisted trunk seated in a pool of water. Only here one can see the original self-existent presiding deity of this temple submerged upto the neck in water. As nature here is at her vibrant best, Guddattu is a dream-come-true to nature lovers. Yet another feature of the idol here is that it was neither sculpted nor installed it is self-manifest (Swayambhu).

ವಿಜಾ ಪನೆ ದೇವಳದ ಪ್ರಗತಿ ಕಾಮಗಾರಿ ಬಗ್ಗೆ ಭಕ್ತಾದಿಗಳಿಂದ ಉದಾರ ಧನ ಸಹಾಯ ನಿರೀಕ್ಷಿಸಲಾಗಿದ್ದು, ದಾನಿಗಳು ನಗದು ಯಾ ಬ್ಯಾಂಕ್ ಖಾತೆಗೆ ಭರಿಸುವ ಮೂಲಕ ಈ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕಾಗಿ ಕೋರಲಾಗಿದೆ. ಸಿಂಡಿಕೇಟ್ ಬ್ಯಾಂಕ್ ಬಿಲ್ ಕಟ್ಟೆ ಶಾಖೆ ಖಾತೆ : ಎಸ್.ಬಿ.016-222-000-29601, ಶ್ರೀ ವಿನಾಯಕ ದೇವಸ್ಥಾನ, ಗುಡ್ಡಟ್ಟು, ಜೀರ್ಣೋದ್ದಾರ ನಿಧಿ ದೇವಳದಲ್ಲಿ ನಿತ್ಯ ಅನ್ನದಾನ ನಡೆಯುತ್ತಿದ್ದು, ಅನ್ನದಾನ ನಿಧಿಗೆ ವಸ್ತು/ನಗದು/ಬ್ಯಾಂಕ್ ಖಾತೆಗೆ ಭರಿಸುವ ಮೂಲಕ ಸಹಾಯ ಮಾಡಬಹುದು. ಸಿಂಡಿಕೇಟ್ ಬ್ಯಾಂಕ್ ಬಿಲ್ ಕಟ್ಟೆ ಶಾಖೆ ಖಾತೆ : ಎಸ್.ಬಿ.016-222-0000-7245, ಶ್ರೀ ವಿನಾಯಕ ದೇವಸ್ಥಾನ, ಗುಡ್ಡಟ್ಟು.

An Appeal Devotees who wish to join hands with the future development works of the Temple are requsted to donate generously by way of cash or credit to Bank Account no.016-222-000-29601 at SyndicateBank, Bidkalkatte Branch standing in the name of Sri Vinayaka Temple, Guddattu (Jirnoddhara Nidhi) Devotees who wish to donate for daily Anna Santharpana (mass feeding) can pay cash or remmit to Bank Account No.: 016-222-0000-7245 at SyndicateBank, Bidkalkatte Branch standing in the name of Sri Vinayaka Temple Guddattu.

Local Legend

ಈ ದೇವಳವು ಯಾವ ಶತಮಾನಕ್ಕೆ ಸೇರಿದ್ದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ದೊರೆತಿರುವುದಿಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನಿಂದಲೂ ಇದು ಅಸ್ತಿತ್ವದಲ್ಲಿ ಇದ್ದಿತ್ತು ಎನ್ನುವುದು ನಿಸ್ಸಂದೇಹ. ದೇವಳದ ಗರ್ಭಗುಡಿ ಅರ್ಥಾತ್ ದೇವರು ನೆಲೆಸಿರುವ ಗುಹೆ ಪ್ರಾಕೃತಿಕವಾದರೂ ಎದುರು ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು ಇತ್ಯಾದಿ ರಚನೆಯಾಗಿರುತ್ತದೆ. ಕಲಾತ್ಮಕವಾದ, ಭವ್ಯವಾದ ಶಿಲಾಮಯ ಗರ್ಭಗುಡಿಯು 1997 ರಲ್ಲಿ ನವೀಕರಣ ಗೊಂಡಿದೆಯಾದರೂ, ಮೊದಲೂ ಕೂಡಾ ಶಿಲಾಮಯ ಗರ್ಭಗುಡಿಯೇ ಅಸ್ತಿತ್ವದಲ್ಲಿ ಇತ್ತು. ಈ ಗರ್ಭಗುಡಿಯು ಸಾಧಾರಣ 800 ವರ್ಷ ಹಳೆಯದು ಎನ್ನುವ ಅಭಿಪ್ರಾಯವನ್ನು ಇಲ್ಲಿಗೆ ಭೇಟಿನೀಡಿದ ಪುರಾತತ್ವ ಸಂಶೋಧಕರು, ಉಡುಪಿ ಎಂ.ಜಿ.ಎಂ ಕಾಲೇಜಿನ ಆಗಿನ ಪ್ರಾಂಶುಪಾಲರೂ ಆದ ಪ್ರೊ. ಗುರುರಾಜ ಭಟ್ಟರು ಅಭಿಪ್ರಾಯ ಪಟ್ಟಿರುತ್ತಾರೆ. ಅಂದರೆ ಸಾವಿರಾರು ವರ್ಷಗಳಿಂದ ಇಲ್ಲಿ ಗಣಪತಿಯ ಆರಾಧನೆ ನಡೆಯುತ್ತಿತ್ತು ಎನ್ನುವುದು ನಿಸ್ಸಂದೇಹ.

Although the ancient history of this temple is yet to be unearthed, there can be no denying the fact that the temple dates back to several centuries. According to a local legend associated with this centre of pilgrimage, Lord Shiva had to wage a war against the wicked demon Tripura-sura. Unfortunately, he forgot to worship Lord Ganapathi and seek his blessings before proceeding to the battlefield. He could not gain victory. It did not take long for Lord Shiva to realise that his own son militated against his victory. Livid with rage, Lord Shiva shot the dreadful and invincible arrow spewing fire targetting Ganapathi. But no weapon could ever harm Ganapathi; nor could the arrow shot by Lord Shiva fail in its mission. In the face of such a dilemma, the arrow just carried Ganapathi bodily and dropped him in the ocean of honey. This proved to be a blessing in disguise to all. As Lord Ganapathi is extremely fond of honey, he drained the ocean and as he was immensely pleased, he blessed Lord Shiva who had offered him the honey. It was due to his blessings that Lord Shiva was able to slay Tripura-sura and emerge victorious. In the meantime, the excessive consumption of honey caused unbearable burning sensation to Lord Ganapathi and he began to writhe in agony. Lord Shiva took pity on his son and wished to alleviate his pain. So He blessed Ganapathi and instructed him to dwell in the pool adjacent to the holy Narsimhatheertha. Thus Ganapathi made the pool in the huge rock his abode and blessed the devotees.

About Us

ಆಡಳಿತ: ಈ ದೇವಳದ ಆಡಳಿತವನ್ನು ದೇವಳದ ಅರ್ಚಕ ಮನೆತನದವರೇ ತಲೆತಲಾಂತರದಿಂದ ಆನುವಂಶಿಕ ನೆಲೆಯಲ್ಲಿ ನೋಡಿಕೊಂಡು ಬಂದಿರುತ್ತಾರೆ. ಈ ಹಿಂದಿನ ಧರ್ಮದರ್ಶಿರಿರುವರಾದ ವೇ.ಮೂ. ಶ್ರೀ ರಾಮಕೃಷ್ಣ ಅಡಿಗರು ದೇವಳದ ಜೀರ್ಣೋದ್ದಾರದ ಕನಸನ್ನು ಕಂಡವರು, ಅವರು ಶಿಲಾಮಯ ಗರ್ಭಗುಡಿಯ ನವೀಕರಣದ ಕೆಲಸಕ್ಕೆ ಚಾಲನೆ ನೀಡಿ ಜೀರ್ಣೋದ್ದಾರಕ್ಕೆ ನಾಂದಿ ಹಾಡಿದರು. ನಿಯೋಜಿತ ಕಾರ್ಯ ಮುಗಿಯುವ ಮೊದಲೇ ಅವರ ಅವಸಾನವಾದ ಕಾರಣ, 1995 ರಲ್ಲಿ ಅವರ ಮಗನಾದ ಶ್ರೀ ಅನಂತ ಪದ್ಮನಾಭ ಅಡಿಗ ಅವರು ಆನುವಂಶಿಕ ನೆಲೆಯಲ್ಲಿ ದೇವಳದ ಆಡಳಿತವನ್ನು ಕೈಗೆತ್ತಿಕೊಂಡು ದೇವಳದ ಸರ್ವಾಂಗೀಣ ಅಭಿವೃದ್ದಿತು ಹರಿಕಾರರಾದರು. ಈ ಒಂದು ದಶಕದಲ್ಲಿ ಒಂದು ಕೋಟಿಗೂ ಮಿಕ್ಕಿ ದ್ರವ್ಯವನ್ನು ಕ್ರೋಢಿಕರಿಸಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದರು. ಇನ್ನು ಹಲವಾರು ಅಭಿವೃದ್ಧಿ ಕಾರ್ಯಗಳ ನೀಲಿನಕ್ಷೆ ತಯಾರಿಸಿದ್ದು, ಶ್ರೀ ದೇವತಾನುಗ್ರಹದಿಂದ ಹಾಗೂ ಭಕ್ತಾಭಿಮಾನಿಗಳ ತುಂಬು ಹೃದಯದ ಸಹಕಾರದಿಂದ ಅವುಗಳನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವ ಆಶದಿರು ಅವರದಾಗಿರುತ್ತದೆ.

ADMINISTRATION The reins of administration are in the hands of the family of temple priests who have been managing the temple hereditarily generation after generation, Vedamoorthy Ramakrishna Adiga, the former trustee, cherished the dream of renovating th e temple. He launched the project by constructing a Garbhagudi of granite as a part of the renovation process. But sad to say, he passed away before he could complete the works. His son Sri Ananthapadmanabha Adiga, who succeeded him, continued the work from where his father had left it and accelerated the process of renovation and all-round development admirably. In the past one decade he could mobilise more than 1 croe rupees to carry out the renovation project to its successful completion. Although much work has been done, a good deal more remains to be done. Hence a blueprint of the proposed development work has been prepared with this in view. It is his fond wish that he will be able to complete it with the blessings of God and with the whole-hearted support of devotees.

ಅರ್ಚಕರು: ಈ ದೇವಳದ ಅರ್ಚಕತ್ವವು ಗುಡ್ಡಟ್ಟು ಅಡಿಗರ ಮನೆತನಕ್ಕೆ ಸೇರಿದ್ದಾಗಿದ್ದು, ಆನುವಂಶಿಕವಾಗಿ ತಲತಲಾಂತರದಿಂದ ನಡೆದು ಕೊಂಡು ಬಂದಿರುತ್ತದೆ. ಸದ್ಯ ವೇ.ಮೂ. ಶ್ರೀ ಅನಂತ ಪದ್ಮನಾಭ ಅಡಿಗರು, ವೇ.ಮೂ. ಶ್ರೀ ರಾಘವೇಂದ್ರ ಅಡಿಗರು, ಹಾಗೂ ವೇ.ಮೂ. ಶ್ರೀ ಸೂರ್ಯನಾರಾಯಣ ಅಡಿಗರು ಇಲ್ಲಿನ ದೈನಂದಿನ ಪೂಜೆ, ಕಟ್ಟು ಕಟ್ಟಲೆ, ವಿಶೇಷಕಟ್ಟಲೆ ಇತ್ಯಾದಿ ಎಲ್ಲವುಗಳನ್ನು ಇಲ್ಲಿನ ಸಂಪ್ರದಾಯಕ್ಕೆ ಅನುಗುಣವಾಗಿ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಉಪಾದಿವಂತರಾಗಿ ಇಲ್ಲಿಯ ಆಸುಪಾಸಿನ ಹಾರ್ಯಾಡಿ, ಹೆದ್ದಾರಿಮಠ, ಹಳ್ಳಾಡಿ ಹಾಗೂ ಕತ್ತೆಕಾನಿನಲ್ಲಿರುವ ಸುಮಾರು 30 ಮನೆಯವರು. .

TEMPLE PRIESTS The priesthood of this temple is vested in the family of Guddattu Adigas. The members of this family have held this office hereditarily down the generation. Vedamoorthy Anantha Padmanabha Adiga, Vedamoorthy Raghvendra Adiga and Vedamoorthy Sooryanarayana Adiga are performing all the different daily Pujas and special rituals as laid down by tradition at present.About 30 households of Haryadi, Heddarimata, Halladi and Kethekan in the neighbourhood are co-operating with the temple authorities in all possible ways.

Work

ಈ ವರೆಗೆ ನಡೆದ ಅಭಿವೃದ್ಧಿ ಕಾರ್ಯಗಳು: ತೀರಾ ಕುಗ್ರಾಮ ವಾಗಿರುವ ಈ ಕ್ಷೇತ್ರ ದಶಕಗಳ ಹಿಂದೆ ಬಹಳ ಜೀರ್ಣಾವಸ್ಥೆಯಲ್ಲಿತ್ತು. ಸುಮಾರು 800 ವರ್ಷಗಳಷ್ಟು ಹಳೆಯದಾದ ಗರ್ಭಗುಡಿ ಹಾಗೂ ಎದುರಿಗೆ ಇರುವ ಹೆಬ್ಬಾಗಿಲು, ಪೌಳಿ ಇತ್ಯಾದಿ ಎಲ್ಲವೂ ಜೀರ್ಣವಾಗಿದ್ದು, ನವೀಕರಣಕ್ಕಾಗಿ ಎದುರು ನೋಡುತ್ತಿದ್ದವು. ಇಂದು ನಾವು ನೋಡುವ ಈ ಭವ್ಯವಾದ ಗರ್ಭಗುಡಿ, ತೀರ್ಥಮಂಟಪ, ಹೆಬ್ಬಾಗಿಲು, ಪೌಳಿ ಇತ್ಯಾದಿ ಎಲ್ಲಾ ರಚನೆಗಳು ದೇವಳದ ಅಂದಿನ ಆನುವಂಶಿಕ ಧರ್ಮದರ್ಶಿಗಳಾಗಿದ್ದ ಶ್ರೀ ವೇ, ಮ. ರಾಮಕೃಷ್ಣ ಅಡಿಗರ ಕನಸು. ಅವರು ಅಂದು 1993 ರ ರಲ್ಲಿ ದೇವಳದ ಗರ್ಭಗುಡಿಯನ್ನು ದಕ್ಷಿಣ ಕನ್ನಡದ ಅಪೂರ್ವವಾದ ಕಾಷ್ಟ ಶಿಲ್ಪ ಕಲೆಯನ್ನು ಶಿಲೆಯಲ್ಲಿ ಅಳವಡಿಸಿ ಶಿಲಾಮಯ ದೇಗುಲ ರಚಿಸಬೇಕೆಂದು ಸಂಕಲ್ಪಿಸಿ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷಗಳ ಒಳಗಾಗಿ ಮುಗಿಯಬೇಕಾಗಿದ್ದ ಆ ಕಾಮಗಾರಿ ಕಾರಣಾಂತರ ದಿಂದ ನಾಲ್ಕು ವರ್ಷಗಳವರೆಗೆ ಮುಂದುವರಿಯಿತು.ಶ್ರೀ ದೇವರ ಅನುಗ್ರಹ ದಿಂದ 1997ರಲ್ಲಿ ಕಾಮಗಾರಿಯು ಪೂರ್ತಿಗೊಂಡು ಭವ್ಯವಾದ ಶಿಲಾ ದೇಗುಲ ಅತ್ಯಾಕರ್ಷಕವಾಗಿ ಎದ್ದು ನಿಂತಿತು.1997ರ ಫೆಬ್ರವರಿಯಲ್ಲಿ ಶ್ರಿಂಗೇರಿ ಶಾರದಾ ಪೀಠಾಧಿಪತಿ ಶಂಕರಾಚಾರ್ಯ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಸದ್ರಿ ಶಿಲಾಮಯ ದೇಗುಲವನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಅಂದು ಚಾಲನೆ ದೊರೆತ ಅಭಿವೃದ್ಧಿ ಕಾರ್ಯ ಎಗ್ಗಿಲ್ಲದೇ ಮುಂದು ವರಿಯುತ್ತಾ ಬಂದು 2004ರಲ್ಲಿ ಹೆಬ್ಬಾಗಿಲು, ಪೌಳಿ, ಶಿಲಾಮಯ ತೀರ್ಥಮಂಟಪ, ಶಿಲಾಮಯ ದೇವಿಗುಡಿ ಇತ್ಯಾದಿಗಳು ರಚನೆಗೊಂಡವು. ಈ ಭವ್ಯ ಮಂದಿರ ಈಗ ಪ್ರತಿದಿನ ಊರ ಪರಊರ ಬಹಳ ಜನರನ್ನು ತನ್ನೆಡೆಗೆ ಆಕರ್ಶಿಸುತ್ತಿದೆ. 2007ರಲ್ಲಿ ಸುಸಜ್ಜಿತವಾದ ಪಾಕಶಾಲೆಯನ್ನೊಳಗೊಂಡ ಭೋಜನಶಾಲೆ ಯನ್ನು ರಚಿಸಲಾಯಿತು. 2007 ರ ಜೂನ್ ನಿಂದ ದೇವಳದಲ್ಲಿ ನಿತ್ಯ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ. 2010ರಲ್ಲಿ ಅತ್ಯಾಕರ್ಷಕವಾದ ಸುಸಜ್ಜಿತ ಯಾಗಾಶಾಲೆಯನ್ನು ರಚಿಸಲಾಯಿತು.

DEVELOPMENT ACTIVITIES This temple, situated in a tiny hamlet,was in a very dilapidated condition till a few decades ago. Exposed to the varying climactic condition for as long as 800 years, the Garbhagudi and the enclosing wall and the main entrance were in a pitiable condition and were crying for renovation. These structures we see now were the dream-children of Vedamoorthy Ramakrishna Adiga, the then hereditary trustee of the temple. In as long back as 1993,he cherished the fond dread of constructing them in granite incorporating the features of the rare wood art of South Kanara. He commenced the construction work with the aim of completing it within a year.But due to unforeseen conditions,the work took four years. Finally the work of the magnificent granite temple was completed in 1997. It was dedicated to the deity by no less a personage than Jagadgura Sri Sri Bharathee Theertha Swamiji, head of Sringeri Sharada Peetha.Then onwards there was no stopping for the development works. The work progressed smoothly and by 2004,the main entrance, the enclosing wall, granite-paved Theertha Mantapa and the Shrine of Mother Goddess were constructed. A spacious Dining Hall equipped with kitchen was constructed in 2007. The temple began to attract hundreds of l ocal devotees as well as devotees from outside. Daily Annasantharpane (Mass feeding) came to be introduced from June 2007. Very attractive Yagashala was constructed during 2010.

Sevas

Sno Name ಹೆಸರು Amount with Kanike in Rs. Kanike in Rs.
1 Panchakajjaya ಪಂಚಕಜ್ಜಾಯ 7.00  
2 Karpoorarthi ಕರ್ಪೂರಾರತಿ 3.00  
3 1 Coconut Ganahoma 1 ಕಾಯಿ ಗಣಹೋಮ 30.00  
4 Harivana Naivedya ಹರಿವಾಣ ನೈವೇದ್ಯ 60.00  
5 Kalasahadhare ಕಲಶಧಾರೆ 60.00  
6 Doorvarchane (Ashtottara) ದೂವಾರ್ಚನೆ (ಅಷ್ಟೋತ್ತರ |ಶತ) 20.00  
7 Doorvarchane (Sahasranama) ದೂವಾರ್ಚನೆ   (ಸಹಸ್ರನಾಮ) 100.00  
8 Panchamritha Abhisheka ಪಂಚಾಮೃತ ಅಭಿಷೇಕ 100.00  
9 1 Rudrabhisheka ಏಕವಾರ ರುದ್ರಾಭಿಷೇಕ 75.00  
10 Atharvashirsha Abhisheka ಅಥರ್ವಶೀರ್ಷ ಅಭಿಷೇಕ 100.00  
11 Sankastha Hara Chaturthi Pooja ಸಂಕಷ್ಟಹರ ಚತುರ್ಥಿ ಪೂಜೆ 100.00  
12 Sone Aarathi ಸೋಣೆ ಆರತಿ 325.00  
13 Mudi Rice Kadabu ಮುಡಿ ಅಕ್ಕಿ ಕಡಬು 75.00  
14 120 Coconut Moodaganapathi 120 ಕಾಯಿ ಮೂಡಗಣಪತಿ 135.00  
15 6 Coconut Ganahoma 6 ಕಾಯಿ ಗಣಹೋಮ 735.00  
16 12 Coconut Ganahoma 12 ಕಾಯಿ ಗಣಹೋಮ 1125.00  
17 24 Coconut Ganahoma 24 ಕಾಯಿ ಗಣಹೋಮ 150.00 150.00
18 48 Coconut Ganahoma 48 ಕಾಯಿ ಗಣಹೋಮ   300.00
19 120 Coconut Ganahoma 120 ಕಾಯಿ ಗಣಹೋಮ   750.00
20 1111 Coconut Ganahoma 1111 ಕಾಯಿ ಗಣಹೋಮ   10000.00
21 Atharvashirsha Homa ಅಥರ್ವಶೀರ್ಷ ಹೋಮ   500.00
22 Tulabhara ತುಲಾಭಾರ 400.00  
23 Ayarakoda ಆಯರಕೂಡ 3000.00  
24 1000 Coconut Moodaganapathi 1000 ಕಾಯಿ ಮೂಡಗಣಪತಿ 1000.00  
25 12 Mudi Rice Kadabu 12 ಮುಡಿ ಅಕ್ಕಿ ಕಡಬು   10000.00
26 Vahana Pooje (2W) ವಾಹನ ಪೂಜೆ (ದ್ವಿಚಕ್ರ) 30.00  
27 Vahana Pooje (Oth) ವಾಹನ ಪೂಜೆ (ಇತರ) 50.00  
28 Upanayana ಉಪನಯನ 50.00  
29 Vivaha (Marriage) ವಿವಾಹ 200.00  
30 Other Vaidic Karma ಇತರ ವೈದಿಕ ಕರ್ಮ 50.00  
31 Kunkkumarchane (Ashtothara) ಕುಂಕುಮಾರ್ಚನೆ (ಅಷ್ಟೋತ್ತರ) 20.00  
32 Sapthashathi Parayana ಸಪ್ತಶತಿ ಪಾರಾಯಣ 250.00  
33 Durga Homa ದುರ್ಗಾಹೋಮ   300.00
34 Chandika Homa ಚಂಡಿಕಾಹೋಮ   600.00

ಸೂಚನೆ:
1) ಎಲ್ಲಾ ಸೇವೆಗಳ ಬಾಬು ಹಣ್ಣು, ಕಾಯಿ, ಹೂವು ಭಕ್ತರೇ ಒದಗಿಸತಕ್ಕದ್ದು.
2) ಬರೇ ಕಾಣಿಕೆ ಯನ್ನು ಮಾತ್ರ ನಿಗದಿಪಡಿಸಿದ ಸೇವೆಗಳ ಸೂತ್ತುಗಳ ಬಾಪು, ಕಛೇರಿಯಲ್ಲಿ ವಿಚಾರಸತಕ್ಕದ್ದು.
3) ಆಯರಕೊಡ ಸೇವಾ ಬಾಪು, ಸಂತರ್ಪಣೆ ಖರ್ಚು ಪ್ರತ್ಯೇಕ.
4) ಅಂಚೆ ಮೂಲಕ ಪ್ರಸಾದ ಕಳುಹಿಸಬೇಕಾದಲ್ಲಿ ಅಂಚೆ ವೆಚ್ಚ ಬಾಬು ರೂ.10 ಅಲ್ಕಾದ
5) ದೇವಳದ ಕಛೇರಿಯಲ್ಲಿ ನಗದು ಪಾವತಿಸಿ ಯಾ ಮನಿಯಾರ್ಡರ್ ಮೂಲಕ ಯಾ ಸಿಂಡಿಕೇಟ್ ಬ್ಯಾಂಕ್ ಬಿಲ್ ಕಟ್ಟೆ ಶಾಖೆ ಉಳಿತಾಯ ಖಾತೆ ನಂಬ್ರ:- 0162-220-7245 ಸಿಂಡಿಕೇಟ್ ಬ್ಯಾಂಕ್ ಉಡುಪಿ ಕೆಥೋಲಿಕ್ ಸೆಂಟರ್ ಶಾಖೆ ಉಳಿತಾಯ ಖಾತೆ ನಂಬ್ರ:- 0110-220-11370 ಸಿಂಡಿಕೇಟ್ ಬ್ಯಾಂಕ್ ಕುಂದಾಪುರ ಮುಖ್ಯ ಶಾಖೆ: ಉಳಿತಾಯ ಖಾತೆ ನಂಬ್ರ:- 0113-220-69166 ಬ್ಯಾಂಕ್ ಡ್ರಾಫ್ಟ್ ಕಳುಹಿಸುವುದರ ಮೂಲಕ ತಮ್ಮ ಸೇವೆಯ ದಿನಾಂಕವನ್ನು ಮುಂಚಿತವಾಗಿ ಕಾದಿರಿಸಬಹುದಾಗಿದೆ. ಸೇವಾಕಾಂಕ್ಷಿಗಳು ತಮ್ಮ ಪೂರ್ತಿ ವಿಳಾಸ ಟೆಲಿಫೋನ್ ನಂಬರ್ ನಮೂದಿಸತಕ್ಕದ್ದು.
6) ಎಲ್ಲ ಶಾಶ್ವತ ಸೇವೆಗಳ ಬಗ್ಗೆ ಭಕ್ತಾಧಿಗಳು ದೇವಳದ ಆಫೀಸಿನಲ್ಲಿ ಯಾ ಧರ್ಮದರ್ಶಿಯವರನ್ನು ಮುಖತ: ಯಾ ಟೆಲಿಫೋನ್ ಮೂಲಕ ವಿಚಾರಿಸಿ ತಿಳಿದುಕೊಳ್ಳತಕ್ಕದ್ದು. |

Note: 1) Devottees should bring fruits, coconuts and flowers for seva offered by them to God.
2) For the sevas where only kanike is mentioned Devottees are requested to enquire about the total seva cost in the Temple Office.
3) In the case of Ayarkoda, cost of Anna Santharpana is separate.
4) Additional Rs.10/- will be charged in case of sending prasada by post.
5) Payment can be done by Cash in the Temple Office or by Money Order or by bank draft in favour of SyndicateBank, Bidkalkatte Branch S/B A/c No:-0162-220-7245 SyndicateBank, Udupi Catholic Centre Branch S/B A/c No:-0110-220-11370 SyndicateBank, Kundapura Main Branch S/B A/c No:-0113-220-69166 with prior intimation of seva date. Devottees are requested to furnish their full address with telephone number without fail.
6) Devottees can get the information about each and every sevas or shashvat sevas in the Temple Office or from Dharmadarshi by calling personally or over telephone.

Aayira Koda

"ಆಯರ ಕೊಡ" ಸೇವೆ ಇಲ್ಲಿಯ ಒಂದು ವಿಶೇಷವಾದ ಸೇವೆಯಾಗಿರುತ್ತದೆ. ಇದೊಂದು ಶುದ್ಧ ವೈದಿಕ ಪ್ರಕ್ರಿಯೆಯಾಗಿರುತ್ತದೆ. ಸೇವೆಯ ಪ್ರಾರಂಭದಲ್ಲಿ ಆ ಮಡುವಿನಲ್ಲಿರುವ ನೀರನ್ನು ತಾಮ್ರದ ಕೈ ಬಟ್ಟಲು ಉಪಯೋಗಿಸಿ ಪೂರ್ತಿ ತೋಡಿ ತೆಗೆದು ಪಾಲಿಗೊಳಿಸಲಾಗುತ್ತದೆ. ನಂತರ ತೈಲಾಭ್ಯಂಜನ ಅರ್ಥಾತ್ ಕೊಬ್ಬರಿ ಎಣ್ಣೆ ಹಚ್ಚಿ ರುದ್ರಾಭಿಷೇಕ ಮಾಡಲಾಗುತ್ತದೆ. ನಂತರ ಈ ಅಭಿಷೇಕದ ನೀರನ್ನು ಹೊರ ತೆಗೆದು ದೇವರಿಗೆ ಮಹಾನೈವೇದ್ಯ (5 ಕಿಲೋ ಅಕ್ಕಿ ಅನ್ನ) ನೆರವೇರಿಸಲಾಗುತ್ತದೆ. ತದನಂತರ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಪುನಃ ರುದ್ರಾಭಿಷೇಕ ನಡೆಯುತ್ತದೆ. ಪುನಃ ಅಭಿಷೇಕ ಮಾಡಿದ ನೀರನ್ನು ಹೊರ ತೆಗೆದು ಋಗೈದದ ಮೊದಲನೇಯ ಅಷ್ಟಕದ ಮೊದಲನೆಯ ಅಧ್ಯಾಯದ ಮಂತ್ರವನ್ನು ಪಠಿಸುತ್ತಾ ಒಳಗಿನ ಅಭಿಷೇಕ ನೀರನ್ನು ಒಂದು ಹನಿಯೂ ಬಿಡದಂತೆ ಬಟ್ಟೆ ಹಾಕಿ ಒರೆಸಿ ತೆಗೆಯಲಾಗುತ್ತದೆ. ಈ ಮಡು ಪ್ರಾಕೃತಿಕವಾದ ಕಾರಣ ಸಮತಟ್ಟಾಗಿರದೇ ಅನೇಕ ಹೊಂಡ (ಕುಳಿಗಳಿಂದ ಕೂಡಿರುತ್ತದೆ. ಇವುಗಳಲ್ಲಿ ಸೇರಿರುವ ನೀರನ್ನು ಬಟ್ಟೆ ಉಪಯೋಗಿಸಿ ಪೂರ್ತಿಯಾಗಿ ಒರೆಸಿ ಚೊಕ್ಕಗೊಳಿಸಲಾಗುತ್ತದೆ. ನಂತರ ಬಂದ ಭಕ್ತಾದಿಗಳಿಗೆ ಶ್ರೀ ದೇವರ ಮೂಲಬಿಂಬ ದರ್ಶನ ಮಾಡಿಸಲಾಗುತ್ತದೆ. ನಂತರ ಮೂಲ ಬಿಂಬಕ್ಕೆ ಪೂಜೆ, ಅಲಂಕಾರ, ನೈವೇದ್ಯ, ಮಂಗಳಾರತಿ, ಮಂತ್ರಪುಷ್ಟ ಇತ್ಯಾದಿಗಳನ್ನು ನೆರವೇರಿಸಿ ಅರ್ಚಕರು ಹೊರಬರುತ್ತಾರೆ. ತದನಂತರ ಪವಮಾನ ಮಂತ್ರ ಪಠಿಸುತ್ತಾ ಆ ಗುಹೆ ಪೂರ್ತಿ ತುಂಬಿ ಎದುರಿನ ದಂಡೆಯಿಂದ ನೀರು ಹೊರ ಹರಿಯುವ ವರೆಗೆ ಶುದ್ದ ಜಲ ಅಭಿಷೇಕ ಮಾಡಲಾಗುತ್ತದೆ. ನಂತರ ಶ್ರೀ ದೇವರಿಗೆ ಮಹಾ ನೈವೇದ್ಯ, ಮಹಾಮಂಗಳಾರತಿ ಇತ್ಯಾದಿ ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಗುತ್ತದೆ. ಮೇಲೆ ತಿಳಿಸಿದಂತೆ ಈ ಸೇವೆಯಲ್ಲಿ ಶ್ರೀ ದೇವರಿಗೆ ಎರಡು ಬಾರಿ ರುದ್ರಾಭಿಷೇಕ ಹಾಗೂ ಒಮ್ಮೆ ಪವಮಾನ ಅಭಿಷೇಕ ಹೀಗೆ ಮೂರು ಬಾರಿ ಅಭಿಷೇಕ ಸೇರಿ ಸಾಧಾರಣ ಒಂದು ಸಾವಿರ ಕೊಡ ಶುದ್ದ ಜಲ ಅಭಿಷೇಕ ವಾಗುವದರಿಂದ ಈ ಸೇವೆಗೆ "ಆಯರ ಕೊಡ" (ಅರ್ಥಾತ್ ಸಹಸ್ರ ಕುಂಭಾಭಿಷೇಕ) ಎಂದು ಹೆಸರು ಬಂದಿರುತ್ತದೆ. ಉರಿಶಮನಕ್ಕಾಗಿ ಇಲ್ಲಿ ನೆಲೆಸಿರುವ ಈ ವಿನಾಯಕನನ್ನು ಯಾರು ತಂಪಾಗಿ ಇರಿಸುತ್ತಾರೋ ಅರ್ಥಾತ್ ಹಳೆಯ ನೀರನ್ನು ತೆಗೆದು ಹೊಸ ನೀರಿನ ಅಭಿಷೇಕ (ಆಯರ ಕೊಡ ಸೇವೆ) ಮಾಡಿಸುತ್ತಾರೋ ಅವರ ಕಾರ್ಯ ಸಿದ್ಧಿಯಾಗುವುದು ಖಂಡಿತ. ಈ ಸೇವೆ ಹಿಂದೆ ದಿನಕ್ಕೆ ಒಂದು ಮಾತ್ರ ನಡೆಯುತ್ತಿತ್ತು. ಇದಕ್ಕಿರುವ ಭಾರೀ ಬೇಡಿಕೆಯನ್ನು ಮನಗಂಡು ಜೂನ್ 16-2007 ರಿಂದ ದಿನಕ್ಕೆ ಎರಡು ಸೇವೆ ನಡೆಸುತ್ತಿದ್ದೇವೆ,

‘Aayira Koda Seva’, the offering of one thousand pots of water. It is a purely Vedic ritual. To begin with, the pool is emptied of its water with the help of hand bowls made of copper. As the next step, coconut oil is applied to the idol and holy bath termed Rudrabhisheka is performed. This is followed by Maha-naivedya of 5kg rice after the water of Rudra- bhisheka is drained. This is again followed by Panchamritha Abhisheka and Rudrabhisheka. After draining the water of the holy bath, the water of the Abhisheka is thoroughly wiped out with a piece of cloth to the accompaniment of chanting of Mantras from the first chapter of Rigveda. As this pool is a natural one, it is studded with pits. The water accumulated in these pits is wiped clean and dry with a piece of cloth so that the devotees may have a wholesome Darshan of the original idol in its entirety. In the next phase of the worship, the temple priest decorates the original idol with flowers, offers Naivedyam and performs Mangalarathi. By far the most important part of the whole ceremony is the ritualistic and ceremonial bath to the idol with pure water till the cave overflows. This is performed with the chanting of Pavamana sookta. Maha naivedya and Mahamangalarathi are offered to the deity again. The distribution of the Prasadam and Annasantharpane (Mass feeding) mark the conclusion of the ceremony. More than 1,000 pots of pure water will be needed for the Rudra-bhisheka performed twice and Pvamanabhisheka enumerated above. This is the reason why this ceremony has come to be called ‘Aayira Koda’, alternately known as Sahasra Kumbhabhisheka. It is performed with the aim of mitigating the burning sensation experienced by the deity. The belief behind this Seva is that when the existing water is replaced with fresh water, it will have a cooling effect on the deity. It has given rise to a firm conviction that when the deity is relieved of his suffering, he will readily grant all the wishes of devotee who offers this Seva. Till recently, this elaborate Seva was performed only once a day. But as the demand for this Seva increased steadily, arrangements were made with effect from 16-06-07 to perform the Seva twice a day starting from 7 AM.

Future Plan

ಮುಂದಿನ ಅಭಿವೃದ್ಧಿಯೋಜನೆಗಳು: ಮುಂದೆ ಭಾರೀ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.ಇವುಗಳಲ್ಲೂ ಈ ಕೆಳಗಿನವು ಮುಖ್ಯವಾಗಿರುತ್ತದೆ.
1) ಪುಷ್ಕರಿಣಿ
2) ದೇವಳದ ರಥಬೀದಿಯ ಮುಂದೆ ರಾಜ ಗೋಪುರ
3) ದೇವಳಕ್ಕೆ ಬರುವ ರಾಜಮಾರ್ಗಗಳ ಬಳಿ ಸ್ವಾಗತ ಗೋಪುರ
4) ದೇವಳದ ಹೊರ ಪ್ರಾಕಾರ
5) ದೇವಳದ ಬಂಡೆಯ ಸುತ್ತಲೂ ರಥಬೀದಿ
6) ಶ್ರೀ ರಥ ನಿರ್ಮಾಣ
7) ಸುಸಜ್ಜಿತ ವಸತಿಗೃಹ.. ಇತ್ಯಾದಿ ಶ್ರೀ ದೇವರ ಅನುಗ್ರಹ ಹಾಗೂ ಭಕ್ತಾದಿಗಳ ಉದಾರ ಸಹಾಯದಿಂದ ಇವುಗಳೆಲ್ಲವೂ ಅತಿ ಶೀಘ್ರದಲ್ಲಿ ನಡೆಯಲಿವೆ ಎಂಬ ತುಂಬು ವಿಶ್ವಾಸ ಈಗಿನ ಧರ್ಮದರ್ಶಿ ಯವರದಾಗಿದೆ. ಈ ಕೆಲವು ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಆದ ನಂತರ ಕೆಲವು ಜನಸೇವಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಆಕಾಂಕ್ಷೆ ಇರುತ್ತದೆ.

PROJECTS ON THE ANVIL
Several development projects are in the pipeline. The chief among them are given below:
1. Pushkarini.
2. Ra-jagopura in front of the car street.
3. Welcome Tower at the road-point leading to the temple.
4. Temple Outer Prakara.
5. Construction of Car Street arround the Temple Rock.
6. Sri Chariot Nirmana.
5. Well-equipped lodge etc……….. The present trustee is quite optimistic that all these projects will soon be executed with the blessings of God and the generous co-operation of devotees. We are eager to take up people-welfare activities after the completion of these projects.

Contact

ವಿಳಾಸ: ಶ್ರೀ ವಿನಾಯಕ ದೇವಸ್ಥಾನ, ಗುಡ್ಡಟ್ಟು
ಯಡಾಡಿ ಮತ್ಯಾಡಿ ಅಂಚೆ, ಕುಂದಾಪುರ ತಾಲೂಕು,
ಉಡುಪಿ ಜಿಲ್ಲೆ - 576222 ಕರ್ನಾಟಕ
ದೂರವಾಣಿ : 0820-2595315
ನಿಸ್ತಂತು: 9632654343ದೂರವಾಣಿ:0820 2595432/9448984694

ADDRESS:   "SHREE VINAYAKA TEMPLE", Guddattu Yadadi Mathyadi Post,
Kundapura Taluk Udupi District – 576222 Karnataka State.
Telephone: 0820 – 2595315 Mobile: 9632654343
Hereditary Trustee:   Sri G.Anantha Padmanabha Adiga
Tele: 0820 2595432/9448984694

Elements

Text

This is bold and this is strong. This is italic and this is emphasized. This is superscript text and this is subscript text. This is underlined and this is code: for (;;) { ... }. Finally, this is a link.


Heading Level 2

Heading Level 3

Heading Level 4

Heading Level 5
Heading Level 6

Blockquote

Fringilla nisl. Donec accumsan interdum nisi, quis tincidunt felis sagittis eget tempus euismod. Vestibulum ante ipsum primis in faucibus vestibulum. Blandit adipiscing eu felis iaculis volutpat ac adipiscing accumsan faucibus. Vestibulum ante ipsum primis in faucibus lorem ipsum dolor sit amet nullam adipiscing eu felis.

Preformatted

i = 0;

while (!deck.isInOrder()) {
  print 'Iteration ' + i;
  deck.shuffle();
  i++;
}

print 'It took ' + i + ' iterations to sort the deck.';

Lists

Unordered

 • Dolor pulvinar etiam.
 • Sagittis adipiscing.
 • Felis enim feugiat.

Alternate

 • Dolor pulvinar etiam.
 • Sagittis adipiscing.
 • Felis enim feugiat.

Ordered

 1. Dolor pulvinar etiam.
 2. Etiam vel felis viverra.
 3. Felis enim feugiat.
 4. Dolor pulvinar etiam.
 5. Etiam vel felis lorem.
 6. Felis enim et feugiat.

Icons

Actions

Table

Default

Name Description Price
Item One Ante turpis integer aliquet porttitor. 29.99
Item Two Vis ac commodo adipiscing arcu aliquet. 19.99
Item Three Morbi faucibus arcu accumsan lorem. 29.99
Item Four Vitae integer tempus condimentum. 19.99
Item Five Ante turpis integer aliquet porttitor. 29.99
100.00

Alternate

Name Description Price
Item One Ante turpis integer aliquet porttitor. 29.99
Item Two Vis ac commodo adipiscing arcu aliquet. 19.99
Item Three Morbi faucibus arcu accumsan lorem. 29.99
Item Four Vitae integer tempus condimentum. 19.99
Item Five Ante turpis integer aliquet porttitor. 29.99
100.00

Buttons

 • Disabled
 • Disabled

Form